ಪಂಡಿತ್ ರಾಜೀವ್ ತಾರಾನಾಥ್ Pandit Rajeev Taranath ರವರ ಸಾಕ್ಷ್ಯಚಿತ್ರ

Directed by

Krishna Masad

Year : 2020

A Documentary on Pandit Rajeev Taranath

ರಾಜೀವ್ ತಾರಾನಾಥ್ : ಮೆಲುಕು ಪಂಡಿತ್ ರಾಜೀವ್ ತಾರಾನಾಥ್ ನಮ್ಮ ನಾಡಿನ ಹೆಮ್ಮೆಯ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕರು. ಗುರು ಶಿಷ್ಯ ಪರಂಪರೆಯಲ್ಲಿ ವಿಶ್ವಾಸವಿಟ್ಟು ಮುನ್ನಡೆದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆಯ ಶಿಖರ ಏರಿದವರು. ಸರೋದ್ ಮಾಂತ್ರಿಕ ಉಸ್ತಾದ್ ಅಕ್ಬರ್ ಅಲಿ ಖಾನ್ ಅವರ ನೇರ ಶಿಷ್ಯರಾಗಿ ಸರೋದ್ ಕಲಿತು, ಖಾನ್ ಸಾಹೇಬರ ಗುರುಕೃಪೆಯೇ ತಮ್ಮ ಸಂಗೀತ ಸಾಧನೆಗೆ ಮೂಲ ಕಾರಣ ಎಂದು ನಂಬಿದವರು . ಸರೋದ್ ವಾದನಕ್ಕೆ ಆಕರ್ಷಿತರಾಗಿ ಇಂಗ್ಲಿಷ್ ಸಾಹಿತ್ಯ ಅಧ್ಯಾಪನ ವೃತ್ತಿಯನ್ನೇ ತೊರೆದು ಸಂಗೀತಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಂಡವರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಜಾಗತಿಕ ಮನ್ನಣೆ ಗಳಿಸಿಕೊಟ್ಟ ಉಸ್ತಾದ್ ಅಲಿ ಅಕ್ಬರ್ ಖಾನ್ ಮತ್ತು ಪಂಡಿತ್ ರವಿಶಂಕರ್ ಅವರ ಘರಾಣದಲ್ಲಿ ಬೆಳೆದು ಅವರಂತೆ ಬೆಳಗಿದ ರಾಜೀವ್ ತಾರಾನಾಥ್ ರವರ ಸರೋದ್ ಸಂಗೀತ ಲೋಕ ಪಯಣದ ಒಂದು ಮೆಲುಕು ಈ ಸಾಕ್ಷ್ಯಚಿತ್ರ .

Rajeev Taranath: A Memoir The internationally acclaimed sarod maestro, Pt Rajeev Taranath, is indeed India’s pride! This stalwart Hindustani musician has risen to the height of excellence in the field of Classical music. Still, in all humility, he ascribes his singular achievement to his illustrious guru, Ustad Ali Akbar Khan’s, blessings. His respect for the Guru-shishya (teacher-disciple) tradition at the heart of Indian music is truly profound. What is more, a renaissance man of our times, Pt Rajeev Taranath, has also had a long and brilliant career in English literature and teaching. Later, he gave up English teaching to do sarod full time. Today, Pt Rajeev Taranath has come a long way in his musical journey. He has followed some legendary musicians (and his teachers) like Ustad Ali Akbar Khan and Pt Ravi Shankar in bringing a global presence to Hindustani music. “Down the Memory Lane” documents this magnificent sarod player’s journey in the musical world.

en_USEnglish